Description
ದೇವರನ್ನು ಕುರಿತು ಬೇರೆ ಬೇರೆ ರೀತಿಗಳಲ್ಲಿ ಮಾತನಾಡುವ ಬೇರೆ ಬೇರೆ ವರ್ಗಗಳ ಜನರು ಜಗತ್ತಿನಲ್ಲಿ ಇದ್ದಾರೆ; ಆದರೆ ವೈದಿಕ ಸಾಹಿತ್ಯದ ಅಭಿಪ್ರಾಯದಲ್ಲಿ ಮತ್ತು ಶಂಕರ, ರಾಮಾನುಜ, ಮಧ್ವ, ವಿಷ್ಣುಸ್ವಾಮಿ, ಚೈತನ್ಯ ಮಹಾಪ್ರಭು ಮೊದಲಾದ ಆಚಾರ್ಯರು ಮತ್ತು ಗುರುಶಿಷ್ಯ ಪರಂಪರೆಯಲ್ಲಿ ಅವರ ಎಲ್ಲ ಅನುಯಾಯಿಗಳು ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಒಮ್ಮತದಿಂದ ಒಪ್ಪಿರುತ್ತಾರೆ…. ಯಾವುದೋ ನಿಗೂಢ ಪ್ರಕ್ರಿಯೆಗಳನ್ನು ಅನುಸರಿಸಿ ತಾವೇ ದೇವರಾಗಲು ನಾಸಿಕ ವರ್ಗದವರು ಪ್ರಯತ್ನಿಸುವುದು ಈಚೆಗಿನ ರೂಢಿ. ಸಾಮಾನ್ಯವಾಗಿ ತಮಗೆ ಅಗಾಧ ಧ್ಯಾನಶಕ್ತಿಯುಂಟೆಂಬ ಕಲ್ಪನೆಯನ್ನು ಅಥವಾ ಮನೋಕಲ್ಪನೆಯ ಸಾಮರ್ಥ್ಯವನ್ನು ಮುಂದು ಮಾಡಿಕೊಂಡು ನಿರೀಶ್ವರವಾದಿಗಳು ತಾವೇ ದೇವರೆಂದು ಹೇಳಿಕೊಳ್ಳುತ್ತಾರೆ. ಕೃಷ್ಣನು ಅಂತಹ ದೇವರಲ್ಲ, ಧ್ಯಾನದ ಯಾವುದೋ ನಿಗೂಢ ಪ್ರಕ್ರಿಯೆಯನ್ನು ಸೃಷ್ಟಿಸಿ ಅವನು ದೇವರಾಗುವುದಿಲ್ಲ, ನಿಗೂಢಯೋಗಾಭ್ಯಾಸಗಳ ಕಠಿಣ ತಪಸ್ಸುಗಳಿಂದ ಅವನು ದೇವರಾಗುವುದಿಲ್ಲ, ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅವನು ದೇವರಾಗುವುದು ಎನ್ನುವುದೇ ಇಲ್ಲ, ಏಕೆಂದರೆ ಎಲ್ಲ ಸನ್ನಿವೇಶಗಳಲ್ಲಿಯೂ ಅವನು ದೇವೋತ್ತಮ.
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪಕರು ಮತ್ತು ಆಚಾರ್ಯರು: ಅಂತಾರಾಷ್ಟ್ರೀಯ
Reviews
There are no reviews yet.